ಬ್ರೇಕಿಂಗ್ ನ್ಯೂಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಚುನಾವಣಾ ಸಿದ್ಧತೆಗಳ ಸಂಪೂರ್ಣ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಚುನಾವಣಾ ಸಿದ್ಧತೆಗಳ ಸಂಪೂರ್ಣ ವಿವರ

ಈಜಗತ್ತು ನ್ಯೂಸ್ ಡೆಸ್ಕ್
News desk
April 30, 2023, 6:28 pm
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತವು 2023ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜುಗೊಂಡಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ. 

  ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸಿದ್ಧತೆಗಳ ವಿವರಗಳನ್ನು ನೀಡಿದ್ದಾರೆ. 

  ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ: 10.05.2023 ರಂದು ಮತದಾನ ಹಾಗೂ ದಿನಾಂಕ: 13.05.2023 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. 

 ಚುನಾವಣಾ ಅಂತಿಮ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳು

 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ, ಚುನಾವಣೆಯ ಅಂತಿಮ ಕಣದಲ್ಲಿ 50 ಪುರುಷರು ಹಾಗೂ 06 ಮಹಿಳೆಯರು ಸೇರಿದಂತೆ ಒಟ್ಟು 56 ಅಭ್ಯರ್ಥಿಗಳಿದ್ದಾರೆ.

 •178-ಹೊಸಕೋಟೆ ವಿಧಾನಸಭಾ ಕ್ಷೇತ್ರ:- 23 ಅಭ್ಯರ್ಥಿಗಳು

 •179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ:- 11 ಅಭ್ಯರ್ಥಿಗಳು

 •180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ:- 12 ಅಭ್ಯರ್ಥಿಗಳು

 •181-ನೆಲಮಂಗಲ ವಿಧಾನಸಭಾ ಕ್ಷೇತ್ರ:- 10 ಅಭ್ಯರ್ಥಿಗಳು

  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 8,77,890 ಮತದಾರರು

4,35,835 ಪುರುಷ ಮತದಾರರು, 4,41,907 ಮಹಿಳಾ ಮತದಾರರು ಹಾಗೂ 148 ಇತರೆ ಮತದಾರರು ಸೇರಿದಂತೆ ಒಟ್ಟು 8,77,890 ಮತದಾರರು ಇದ್ದಾರೆ. 

178-ಹೊಸಕೋಟೆ ವಿಧಾನಸಭಾ ಕ್ಷೇತ್ರ 1,16,252 ಪುರುಷ ಮತದಾರರು, 1,17,805 ಮಹಿಳಾ ಮತದಾರರು ಹಾಗೂ 22 ಇತರೆ ಮತದಾರರು ಸೇರಿದಂತೆ ಒಟ್ಟು 2,34,079 ಮತದಾರರು ಇದ್ದಾರೆ. 

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ 1,05,520 ಪುರುಷ ಮತದಾರರು, 1,06,646 ಮಹಿಳಾ ಮತದಾರರು ಹಾಗೂ 19 ಇತರೆ ಮತದಾರರು ಸೇರಿದಂತೆ ಒಟ್ಟು 2,12,185 ಮತದಾರರು ಇದ್ದಾರೆ. 

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ 1,06,621 ಪುರುಷ ಮತದಾರರು, 1,07,559 ಮಹಿಳಾ ಮತದಾರರು ಹಾಗೂ 02 ಇತರೆ ಮತದಾರರು ಸೇರಿದಂತೆ ಒಟ್ಟು 2,14,182, ಮತದಾರರು ಇದ್ದಾರೆ. 

181-ನೆಲಮಂಗಲ ವಿಧಾನಸಭಾ ಕ್ಷೇತ್ರ 1,07,442 ಪುರುಷ ಮತದಾರರು, 1,09,897 ಮಹಿಳಾ ಮತದಾರರು ಹಾಗೂ 105 ಇತರೆ ಮತದಾರರು ಸೇರಿದಂತೆ ಒಟ್ಟು 2,17,444 ಮತದಾರರು ಇದ್ದಾರೆ. 

ಒಟ್ಟು 130 ಸೇವಾ ಮತದಾರರು

 124 ಪುರುಷ ಮತದಾರರು ಹಾಗೂ 06 ಮಹಿಳಾ ಮತದಾರರು ಸೇರಿದಂತೆ ಒಟ್ಟು 130 ಮತದಾರರು ಇದ್ದಾರೆ. 

ಜಿಲ್ಲೆಯಲ್ಲಿ ಒಟ್ಟು 24713 ಯುವ ಮತದಾರರು

 •13126 ಪುರುಷರು, 11584 ಮಹಿಳೆಯರು ಹಾಗೂ ಮೂವರು ಇತರೆ ಯುವ ಮತದಾರರು ಸೇರಿ ಜಿಲ್ಲೆಯಲ್ಲಿ ಒಟ್ಟು 24713 ಯುವ ಮತದಾರಿದ್ದಾರೆ.

 •178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 4304 ಪುರುಷ ಹಾಗೂ 3920 ಮಹಿಳಾ ಯುವ ಮತದಾರರು ಇದ್ದಾರೆ. 

•179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2872 ಪುರುಷ , 2450 ಮಹಿಳೆ ಹಾಗೂ ಒಬ್ಬರು ಇತರೆ ಯುವ ಮತದಾರರಿದ್ದಾರೆ. 

•180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 3269 ಪುರುಷ ಹಾಗೂ 2828 ಮಹಿಳಾ ಯುವ ಮತದಾರರಿದ್ದಾರೆ.

 •181-ನೆಲಮಂಗಲ ವಿಧಾನಸಭಾ ಕ್ಷೇತ್ರದ ಲ್ಲಿ 2681 ಪುರುಷ , 2386 ಮಹಿಳೆ ಹಾಗೂ ಇಬ್ಬರು ಇತರೆ ಯುವ ಮತದಾರರಿದ್ದಾರೆ. 

 ಜಿಲ್ಲೆಯಲ್ಲಿ ಒಟ್ಟು 12143 ವಿಕಲಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 20354 ಮತದಾರರು

 •178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 3351, 

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 3259, 

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 3327 ಹಾಗೂ

181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 2206 ವಿಕಲಚೇತನ ಮತದಾರರಿದ್ದಾರೆ. 

•178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 4429, 

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 5125 

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 5009 ಹಾಗೂ 

181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 5791 ಎಂಭತ್ತು(80) ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. 

 ಮತದಾರರ ಗುರುತಿನ ಚೀಟಿ-ಎಪಿಕ್ (EPIC) ವಿತರಣೆ

 ಹೊಸದಾಗಿ ನೊಂದಣಿಯಾಗಿರುವ ಯುವ ಮತದಾರರಿಗೆ ಮತ್ತು ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಿರುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಶೀಘ್ರ ಅಂಚೆ ಮೂಲಕ ಕಳುಹಿಸಲು ಕ್ರಮ ವಹಿಸಲಾಗಿದೆ. 

 ಮತದಾರರ ಮಾಹಿತಿ ಚೀಟಿ ಹಾಗೂ ಮತದಾರರ ಕೈಪಿಡಿ(Voter information Slip and Voter Guide)

  ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ಮತಗಟ್ಟೆಯ ವಿವರ, ಮತದಾನದ ದಿನಾಂಕ, ಸಮಯ ಹಾಗೂ ಮತದಾರರ ವಿವರವುಳ್ಳ ಮತದಾರರ ಮಾಹಿತಿ ಚೀಟಿಯನ್ನು ಈಗಾಗಲೇ ಸರಬರಾಜು ಮಾಡಲಾಗಿದ್ದು, ವಿಧಾನಸಭಾ ಕ್ಷೇತ್ರವಾರು ಮರುಹಂಚಿಕೆ ಮಾಡಲಾಗಿರುತ್ತದೆ. ಸದರೀ ಮತದಾರರ ಮಾಹಿತಿ ಚೀಟಿಯನ್ನು ಹಾಗೂ ವೋಟರ್ ಕೈಪಿಡಿ ಮತದಾನದ ದಿನಕ್ಕಿಂತ ಐದು ದಿನ ಮುಂಚಿತವಾಗಿ ಮೇ 1ರಿಂದ 5ರ ಒಳಗೆ ಎಲ್ಲಾ ಮತದಾರರಿಗೆ ಬಿಎಲ್ಓ‌ಗಳ ಮುಖಾಂತರ ವಿತರಿಸಲಾಗುವುದು. ಮತದಾನದ ದಿನದಂದು ಮತಗಟ್ಟೆಗಳ ಬಳಿ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗುವುದು. ಸಂಬಂಧಪಟ್ಟ ಬಿಎಲ್ಓಗಳು ಮತದಾರರ ಪಟ್ಟಿಯೊಂದಿಗೆ ಕೌಂಟರ್‌ನಲ್ಲಿ ಹಾಜರಿದ್ದು ಸಂಬಂಧಪಟ್ಟ ಮತದಾರರಿಗೆ ವಿವರಗಳನ್ನು ನೀಡುವರು. 

ವಿಕಲಚೇತನರು, ಹಿರಿಯ ನಾಗರಿಕರು, ಅಗತ್ಯ ಸೇವೆಯಲ್ಲಿರುವ ಮತದಾರರು, ಕೋವಿಡ್ ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳ ಪ್ರವರ್ಗದಲ್ಲಿನ ಗೈರು ಹಾಜರಿ ಮತದಾರರು( Initiatives for PwD Voters, 80+ Citizens, Electors employed in essential services and COVID suspect/affected voters)

 ಭಾರತ ಚುನಾವಣಾ ಆಯೋಗವು ಪ್ರಥಮ ಬಾರಿಗೆ ವಿಕಲಚೇತನ ಮತದಾರರು, 80 ವರ್ಷ ಮೇಲ್ಪಟ್ಟ ಮತದಾರರು, ಅಗತ್ಯ ಸೇವೆ ನೀಡುವ ಅಧಿಕಾರಿ/ಸಿಬ್ಬಂದಿಗಳಿಗೆ ಅಂಚೆ ಮತಪತ್ರದ ಮೂಲಕ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

  ಜಿಲ್ಲೆಯಲ್ಲಿ ಸ್ವ-ಇಚ್ಚೆಯಿಂದ ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಳ್ಳಲಾದ ಮತದಾರರ ವಿವರಗಳು: 

•ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಮತದಾರರು 470, ವಿಕಲಚೇತನರು 113 ಹಾಗೂ ಅಗತ್ಯ ಸೇವೆ ನೀಡುವ ಅಧಿಕಾರಿ/ಸಿಬ್ಬಂದಿಗಳು 74. •ಜಿಲ್ಲೆಯಲ್ಲಿ ಸ್ವ ಇಚ್ಚೆಯಿಂದ ಮನೆಯಲ್ಲಿಯೇ ಮತದಾನ ಮಾಡಲು ಆಯ್ಕೆ ಮಾಡಿಕೊಳ್ಳಲಾದ ಮತದಾರರಿಂದ ಏಪ್ರಿಲ್ 29 ಹಾಗೂ 30 ರಂದು ಮತದಾನ ಕಾರ್ಯ ಹಮ್ಮಿಕೊಳ್ಳಲಾಯಿತು. ಏಪ್ರಿಲ್ 29ರಂದು 562 ಮತದಾರರು ಮನೆಯಿಂದಲೇ ಮತದಾನ ಮಾಡಿರುತ್ತಾರೆ. • ಈ ಕಾರ್ಯವನ್ನು ಸೆಕ್ಟರ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. •ಸಂಬಂಧಪಟ್ಟ ಮತದಾರರಿಗೆ ಮನೆಯ ಮುಖಾಂತರ ಮತದಾನ ಮಾಡಲು ಮತಗಟ್ಟೆ ಸಿಬ್ಬಂದಿ ಹಾಗೂ ವಿಡಿಯೋ ಗ್ರಾಫರ್ ನೊಂದಿಗೆ ಮತ್ತು ಇತರೆ ವ್ಯವಸ್ಥೆಗಳನ್ನು ಕಲ್ಪಿಸಲಾಯಿತು. 

 • ಅಂಚೆ ಮತದಾನ ಕೇಂದ್ರವನ್ನು ಆಯಾ ತಾಲ್ಲೂಕು ಕಛೇರಿಯಲ್ಲಿ ದಿನಾಂಕ 2.5.2023 ರಿಂದ 4.5.2023 ರವರೆಗೆ ತೆರೆಯಲಾಗಿದ್ದು, ಈ ದಿನಗಳಲ್ಲಿ ಅಗತ್ಯ ಸೇವೆಯಲ್ಲಿರುವ ಅಧಿಕಾರಿ/ಸಿಬ್ಬಂದಿಗಳು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ಒಳಗೆ ಮತದಾನ ಮಾಡಬಹುದಾಗಿದೆ. ಮತದಾನ ಮಾಡಲು ಬರುವ ಅಧಿಕಾರಿ/ಸಿಬ್ಬಂದಿಗಳಿಗೆ ಚುನಾವಣಾ ಆಯೋಗದಿಂದ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ. 

ಮತಗಟ್ಟೆಗಳ ವಿವರ
  
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 1137 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳಿವೆ. 

•178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 293 ಮತಗಟ್ಟೆಗಳು, 

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 292 ಮತಗಟ್ಟೆಗಳು, 

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳು ಹಾಗೂ 

181-ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳಿವೆ.

•ಸೂಕ್ಷ್ಮ ಮತಗಟ್ಟೆಗಳು:-502 

•ಪ್ರತಿ ಮತಗಟ್ಟೆಗೆ ಜಿಲ್ಲೆಯಲ್ಲಿ ಸರಾಸರಿ 770 ಮತದಾರರಿರುತ್ತಾರೆ. 

• ಜಿಲ್ಲೆಯಲ್ಲಿನ ಎಲ್ಲಾ ಮತಗಟ್ಟೆಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿರುತ್ತದೆ. 

• ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾರರಿರುವ ಮತಗಟ್ಟೆ ಸಂಖ್ಯೆ:- 78 (ನೆಲಮಂಗಲ) ಮತದಾರರು: 134 

• ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರಿರುವ ಮತಗಟ್ಟೆ ಸಂಖ್ಯೆ:-211 (ಹೊಸಕೋಟೆ) ಮತದಾರರು: 1602 

• 1000 ಮತದಾರರಿಗಿಂತ ಹೆಚ್ಚು ಮತದಾರರಿರುವ ಒಟ್ಟು 212 ಮತಗಟ್ಟೆಗಳಿವೆ. 

ವಿಶೇಷ ಮತಗಟ್ಟೆಗಳ ವಿವರ

 ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 05 ರಂತೆ 20 ಮಹಿಳಾ (ಸಖಿ) ಮತಗಟ್ಟೆಗಳು, 04 ವಿಕಲಚೇತನ ಮತಗಟ್ಟೆ, 04 ಯುವ ನೌಕರರ ಮತಗಟ್ಟೆ, 04 ಎತ್ನಿಕ್ ಮತಗಟ್ಟೆ ಹಾಗೂ 08 ಮಾದರಿ ಮತಗಟ್ಟೆಗಳಿವೆ. 

ವಿಡಿಯೋಗ್ರಾಫೀ/ವೆಬ್ ಕ್ಯಾಸ್ಟಿಂಗ್/ಸಿಸಿಟಿವಿ ಕವರೇಜ್ ವಿವರ

 • ವೆಬ್ ಕ್ಯಾಸ್ಟಿಂಗ್:- ಜಿಲ್ಲೆಯಲ್ಲಿ 1137 ಮತಗಟ್ಟೆಗಳ ಪೈಕಿ 50% ಅಂದರೆ 569 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಸೌಲಭ್ಯವನ್ನು ಚುನಾವಣಾ ಆಯೋಗದಿಂದ ನಿರ್ವಹಿಸಲಾಗಿರುತ್ತದೆ. (ಸೂಕ್ಷ್ಮ-Critical/Vulnerable ಮತಗಟ್ಟೆಗಳು ಒಳಗೊಂಡಂತೆ) • Micro Observer :- ಜಿಲ್ಲೆಯಲ್ಲಿನ 1137 ಮತಗಟ್ಟೆಗಳ ಪೈಕಿ 284 ಮತಗಟ್ಟೆಗಳಿಗೆ Micro Observer ಗಳನ್ನು ನೇಮಿಸಲಾಗಿರುತ್ತದೆೆ
 (ಕ್ರಿಟಿಕಲ್/Vulnerable ಮತಗಟ್ಟೆಗಳು ಒಳಗೊಂಡಂತೆ). • CAPF :- ಜಿಲ್ಲೆಯಲ್ಲಿನ ಎಲ್ಲಾ ಕ್ಲಸ್ಟರ್ ಮತಗಟ್ಟೆಗಳಿಗೆ ಸಿಎಪಿಎಫ್ ಗಳನ್ನು ನೇಮಿಸಲಾಗುವುದು. 

 • Videography:- ಎಲ್ಲಾ ಎಫ್.ಎಸ್.ಟಿ, ಚೆಕ್ ಪೋಸ್ಟ್, ವಿ.ಎಸ್.ಟಿ. ತಂಡಗಳಿಗೆ ಇವಿಎಂ ಕಾರ್ಯಗಳಿಗೆ ಈಗಾಗಲೇ ವಿಡಿಯೋಗ್ರಾಫಿ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಹಾಗೂ ಇತರೆ ಚುನಾವಣಾ ಪ್ರಮುಖ ಕಾರ್ಯಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. 

ಮತಗಟ್ಟೆ ಸಿಬ್ಬಂದಿ ನೇಮಕಾತಿ ಹಾಗೂ ತರಬೇತಿ ವಿವರ:-

 ಜಿಲ್ಲೆಯ 1137 ಮತಗಟ್ಟೆಗಳಿಗೆ 1470 ಪಿಆರ್‌ಓ, 1499 ಎಪಿಆರ್‌ಓ, 2929 ಹಾಗೂ 285 ಮೈಕ್ರೋ ಅಬ್ಸರ್ವರ್ಸ್‌ಗಳನ್ನು ನೇಮಿಸಲಾಗಿದ್ದು ತರಬೇತಿ ನೀಡಲಾಗುತ್ತಿದೆ. •ಮತಗಟ್ಟೆಯ ಸಿಬ್ಬಂದಿಯ ನೇಮಕಾತಿ ಮತ್ತು ತರಬೇತಿ :- 

• ಮತಗಟ್ಟೆಯ ಸಿಬ್ಬಂದಿಗೆ ಮತದಾನ ಪ್ರಕ್ರಿಯೆ ಕುರಿತು ಈಗಾಗಲೇ 1ನೇ ಹಂತದ ತರಬೇತಿಯನ್ನು ದಿನಾಂಕ 16.4.2023 ರಂದು ನೀಡಲಾಗಿದ್ದು, 2ನೇ ಹಂತದ ತರಬೇತಿಯನ್ನು ದಿನಾಂಕ 4.5.2023 ರಂದು ನೀಡಲಾಗುತ್ತದೆ. 

 • ಮತಗಟ್ಟೆಗಳಿಗೆ ನೇಮಕ ಮಾಡಲಾದ ಸಿಬ್ಬಂದಿಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಈಗಾಗಲೇ ನಮೂನೆ-12 ನ್ನು ವಿತರಿಸಲಾಗಿದ್ದು, ದಿನಾಂಕ 4.5.2023 ರಂದು ಮತದಾನ ಮಾಡಲು Postal Ballot Facilitation Centre ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. 

ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗಿರುವ ಇವಿಎಂ ಗಳ ಮತ್ತು ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಗಳ ವಿವರ:-

 •178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 352 ಬ್ಯಾಲೆಟ್ ಯೂನಿಟ್(ಬಿಯು), 352 ಕಂಟ್ರೋಲ್ ಯೂನಿಟ್(ಸಿಯು) ಹಾಗೂ 381 ವಿವಿಪ್ಯಾಟ್ ಹಂಚಿಕೆಯಾಗಿದೆ. ಭಧ್ರತಾ ಕೊಠಡಿ ವ್ಯವಸ್ಥೆಯನ್ನು ಹೊಸಕೋಟೆ ಟೌನ್‌ನ ದೊಡ್ಡಗತ್ತಿನಬ್ಬೆ ರಸ್ತೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ(ಪಿಯು) ಕಾಲೇಜಿನಲ್ಲಿ ಕಲ್ಪಿಸಲಾಗಿದೆ. 

•179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 350 ಬ್ಯಾಲೆಟ್ ಯೂನಿಟ್, 350 ಕಂಟ್ರೋಲ್ ಯೂನಿಟ್ ಹಾಗೂ 380 ವಿವಿಪ್ಯಾಟ್ ಹಂಚಿಕೆಯಾಗಿದೆ. ಭದ್ರತಾ ಕೊಠಡಿ ವ್ಯವಸ್ಥೆಯನ್ನು ದೇವನಹಳ್ಳಿ ಟೌನ್‌ನ ಬಿಬಿ ರಸ್ತೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ(ಪಿಯು) ಕಾಲೇಜಿನಲ್ಲಿ ಕಲ್ಪಿಸಲಾಗಿದೆ. 

•180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 331 ಬ್ಯಾಲೆಟ್ ಯೂನಿಟ್, 331 ಕಂಟ್ರೋಲ್ ಯೂನಿಟ್ ಹಾಗೂ 359 ವಿವಿಪ್ಯಾಟ್ ಹಂಚಿಕೆ ಮಾಡಲಾಗಿದೆ. ಭಧ್ರತಾ ಕೊಠಡಿ ವ್ಯವಸ್ಥೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಕಲ್ಪಿಸಲಾಗಿದೆ.

 •181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 331 ಬ್ಯಾಲೆಟ್ ಯೂನಿಟ್, 331 ಕಂಟ್ರೋಲ್ ಯೂನಿಟ್ ಹಾಗೂ 359 ವಿವಿಪ್ಯಾಟ್ ಹಂಚಿಕೆ ಮಾಡಲಾಗಿದೆ. ಭದ್ರತಾ ಕೊಠಡಿ ವ್ಯವಸ್ಥೆಯನ್ನು ನೆಲಮಂಗಲ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪಿಸಲಾಗಿದೆ. 

•ಒಟ್ಟಾರೆ 1364 ಬ್ಯಾಲೆಟ್ ಯೂನಿಟ್(ಬಿಯು), 1364 ಕಂಟ್ರೋಲ್ ಯೂನಿಟ್(ಸಿಯು) ಹಾಗೂ 1479 ವಿವಿಪ್ಯಾಟ್ ಹಂಚಿಕೆಯಾಗಿದೆ. 

ಇವಿಎಂಗಳ ರಾಂಡಮೈಸೇಷನ್:-

 ಈಗಾಗಲೇ 1ನೇ ಹಂತ ಹಾಗೂ 2ನೇ ಹಂತದ ಇವಿಎಂ ರಾಂಡಮೈಸೇಷನ್ ಮಾಡಲಾಗಿದೆ. 

ಇವಿಎಂ–ವಿವಿಪ್ಯಾಟ್ ಗಳ ಕಮಿಷನಿಂಗ್:-

 ಮೇ1 ರಿಂದ ಮೇ 02 ರವರೆಗೆ ಇವಿಎಂ ವಿವಿಪ್ಯಾಟ್ ಕಮಿಷನಿಂಗ್ ಹಮ್ಮಿಕೊಳ್ಳಲಾಗುವುದು.

 ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ವಿವಿಧ ತಂಡಗಳಿಂದ ಇದುವರೆಗೂ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಒಟ್ಟಾರೆ ಮೌಲ್ಯ 4,16,04,026 ರೂ.ಗಳು.

 ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ 29.03.2023 ರಿಂದ 28.04.2023 ರವರೆಗೆ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ವಿವರ •ನಗದು: ಮೌಲ್ಯ ರೂ. 65,47,507 •ಮದ್ಯ: ಮೌಲ್ಯ ರೂ. 2,52,55,627 (90711.010ಲೀ) •ಮಾದಕ ವಸ್ತು: ಮೌಲ್ಯ ರೂ. 1,82,87,00 (27.899ಕೆಜಿ) •ಇತರೆ ವಸ್ತು: ಮೌಲ್ಯ ರೂ. 79,72,192 •ಒಟ್ಟು ರೂ. 4,16,04,026. 

ಚುನಾವಣಾ ವೆಚ್ಚ ಮೇಲ್ವಿಚಾರಣೆ (Election Expenditure Monitoring)

 ಚುನಾವಣಾ ವೆಚ್ಚ ನಿರ್ವಹಣೆ ಸಲುವಾಗಿ ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ವಿವಿಧ ತಂಡಗಳನ್ನು ಈಗಾಗಲೇ ರಚಿಸಲಾಗಿದ್ದು ಕಾರ್ಯೋನ್ಮುಖವಾಗಿದೆ. 

ಜಿಲ್ಲಾ ಮಟ್ಟದಲ್ಲಿರುವ ತಂಡಗಳ ವಿವರ:-

 •Media Certification and Monitoring Committee (MCMC). 

•Media Monitoring cell (MMC) 

•District Media Scrutiny Cell(DMSC) District Election Monitoring Cell(DEMC) 

•Cash Seizure Committee. •Social Media Monitoring Committee. 

 •District Model Code of Conduct Cell 

•District Election Expenditure Monitoring Committee 

 •Screening Committee. 

•ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ದೂರವಾಣಿ ಸಂಖ್ಯೆ. 1950 ರಂತೆ ಹಾಗೂ ವಿಧಾನಸಭಾ ಕ್ಷೇತ್ರವಾರು 24/7 ಕಂಟ್ರೋಲ್ ರೂಂಗಳನ್ನು ತೆರಯಲಾಗಿರುತ್ತದೆ. 

ವಿಧಾನಸಭಾ ಕ್ಷೇತ್ರ ಮಟ್ಟದ ತಂಡಗಳ ವಿವರ:-

 ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 104 ಸೆಕ್ಟರ್ ಅಧಿಕಾರಿಗಳು, 26 ಎಸ್‌ಎಸ್‌ಟಿ ತಂಡ, 15 ಎಫ್‌ಎಸ್‌ಟಿ ತಂಡ, 10 ವಿಎಸ್‌ಟಿ, 8 ವಿವಿಟಿ, 8 ಎಟಿ ಹಾಗೂ 8 ಎಇಓ ತಂಡವು ಕಾರ್ಯನಿರ್ವಹಿಸುತ್ತಿದೆ. 

ಸಭೆ ಸಮಾರಂಭ ಮತ್ತು ವಾಹನಗಳಿಗೆ ಅನುಮತಿ ನೀಡುವ ಬಗ್ಗೆ:-

 ಜಿಲ್ಲಾ ಮಟ್ಟದ ಸಭೆ, ಸಮಾರಂಭ ಮತ್ತು ವಾಹನಗಳಿಗೆ ಅನುಮತಿ ನೀಡಲು ಜಿಲ್ಲಾ ಮಟ್ಟದ ಏಕಾಗವಾಕ್ಷಿ ತಂಡ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದ ಸಭೆ, ಸಮಾರಂಭ ಮತ್ತು ವಾಹನಗಳಿಗೆ ಅನುಮತಿ ನೀಡಲು ವಿಧಾನಸಭಾ ಮಟ್ಟದಲ್ಲಿ ಏಕಾಗವಾಕ್ಷಿ ತಂಡಗಳನ್ನು ರಚಿಸಲಾಗಿರುತ್ತದೆ. 

ಪ್ರಜಾಪ್ರಭುತ್ವ ಹಬ್ಬ

‌  ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಮತದಾರರಲ್ಲಿ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ “ನಮ್ಮ ನಡೆ ಮತಗಟ್ಟೆಯ ಕಡೆ" ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ ಹಿನ್ನೆಲೆ ಈ ಕಾರ್ಯಕ್ರಮವನ್ನು ಏಪ್ರಿಲ್ 30 ರಂದು ಬೆಳಗ್ಗೆ 8.00 ಗಂಟೆಗೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಿ, ಪ್ರಾಥಮಿಕ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ, ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಮಸ್ಟರಿಂಗ್ ಮತ್ತು ಡಿ–ಮಸ್ಟರಿಂಗ್ ಕೇಂದ್ರಗಳ ವಿವರ:-

 178-ಹೊಸಕೋಟೆ ವಿಧಾನಸಭಾ ಕ್ಷೇತ್ರ: ಹೊಸಕೋಟೆ ಟೌನ್‌ನ ಎಂವಿ ಎಕ್ಸ್ಟೆಂಶನ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 

 •179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: ದೇವನಹಳ್ಳಿ ಟೌನ್‌ನ ಬಿಬಿ ರಸ್ತೆಯ, ಹೊಸ ಬಸ್‌ಸ್ಟ್ಯಾಂಡ್‌ ಎದುರಿನ ಸರ್ಕಾರಿ ಕಿರಿಯ ಕಾಲೇಜು 

 •180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ 

 •181-ನೆಲಮಂಗಲ ವಿಧಾನಸಭಾ ಕ್ಷೇತ್ರ: ನೆಲಮಂಗಲ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 

ಮತ ಏಣಿಕೆ ಕೇಂದ್ರ ಮತ್ತು ಭದ್ರತಾ ಕೊಠಡಿ:-

 • ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭದ್ರತಾ ಕೊಠಡಿಗಳನ್ನು ಹಾಗೂ ಮತ ಎಣಿಕಾ ಕೊಠಡಿಗಳನ್ನು ದೇವನಹಳ್ಳಿ ತಾಲ್ಲೂಕಿನ ಪ್ರಸನ್ನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಿಗದಿಪಡಿಸಲಾಗಿದೆ. 

• ಈಗಾಗಲೇ ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕಾ ಕೊಠಡಿಗಳು ಹಾಗೂ ಭದ್ರತಾ ಕೊಠಡಿಗಳನ್ನು ಸಿದ್ಧಪಡಿಸುವಿಕೆಯ ಕಾರ್ಯ ಪ್ರಗತಿಯಲ್ಲಿದೆ. 

• ಮೇ 10 ರಂದು ಮತದಾನ ಪ್ರಕ್ರಿಯೆ ಮುಗಿದ ನಂತರ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕಾ ಕೇಂದ್ರದಲ್ಲಿ ಮತದಾನ ಆಗಿರುವ ಇವಿಎಂ ಹಾಗೂ ವಿವಿ ಪ್ಯಾಟ್‌ಗಳನ್ನು ಆಯಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರವಾರು ನಿಗಧಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಭದ್ರ ಪಡಿಸಲಾಗುವುದು.

  ಮಾಹಿತಿ ತಂತ್ರಜ್ಞಾನ ಅಪ್ಲಿಕೇಶನ್ಸ್‌ಗಳ ಬಳಕೆ(Use of IT Applications):-

• VHA App, NVSP & Voter Portal: For enrollment, modification and Deletions of Voters and information about electoral roll information. 
• Saksham ECI App: ವಿಕಲಚೇತನ ಮತದಾರರರು ಸೌಲಭ್ಯಗಳನ್ನು ಪಡೆಯಲು. 

• NGRS Portal: ಮತದಾರರು ಸಾರ್ವಜನಿಕರು ದೂರನ್ನು ಸಲ್ಲಿಸಲು. 

 • cVIGIL: ಮತದಾರರು ಸಾರ್ವಜನಿಕರು ಯಾವುದೇ ಅಭ್ಯರ್ಥಿಗಳು ಮತದಾರರಿಗೆ ಉಡುಗೊರೆ, ಹಣ, ಮಧ್ಯ ಇತರೆ ವಸ್ತುಗಳನ್ನು ವಿತರಿಸುವುದು ಕಂಡುಬಂದಲ್ಲಿ ಕೂಡಲೇ cVIGIL App ಮುಖಾಂತರ ದೂರನ್ನು ಸಲ್ಲಿಸಬಹುದು. ದೂರು ಸಲ್ಲಿಸಿದ 100 ನಿಮಿಷಗಳೊಳಗಾಗಿ ಅಗತ್ಯ ಕ್ರಮ ವಹಿಸಲಾಗುವುದು. 

• Know your candidate (KYC) application: ಮತದಾರರು /ಸಾರ್ವಜನಿಕರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ Criminal Antecedents ನ ಬಗ್ಗೆ ಮಾಹಿತಿಯನ್ನು ಪಡೆಯಬಹುದು. 

• Voter Turnout App: ಮತದಾನ ದಿನದಂದು ಪ್ರತಿ 2 ಗಂಟೆಗೊಮ್ಮೆ ಶೇಕಡವಾರು ಮತದಾನದ ಮಾಹಿತಿಯನ್ನು ಪಡೆಯಬಹುದು. 

• Results website and Results trends TV: ಮತದಾರರು /ಸಾರ್ವಜನಿಕರು ಎಣಿಕಾ ದಿನದಂದು ಪ್ರತಿ ಸುತ್ತಿನ ಫಲಿತಾಂಶವನ್ನು ಪಡೆಯಬಹುದು.

ಈ ಕ್ಷಣದ ಸುದ್ದಿ