ತಾಪಮಾನ ಏರಿಕೆಯ ಧಗೆಯ ಜೊತೆಗೆ ರೋಗಿಗಳಿಗೆ ಔಷದಿಗಳ ಬೆಲೆ ಏರಿಕೆಯ ಬಿಸಿಯೂ ತಟ್ಟಲಿದೆ
ನವದೆಹಲಿ: ತಾಪಮಾನ ಏರಿಕೆ ಜೊತೆಗೆ ಔಷಧಿಗಳ ಬೆಲೆ ಏರಿಕೆ ರೋಗಿಗಳ ಜೇಬನ್ನು ಸುಡಲಿದೆ. ಈ ವಾರದ ಆರಂಭದಲ್ಲಿ ಏಪ್ರಿಲ್ 1 ರಿಂದ ಅಗತ್ಯ ಔಷದಿಗಳ ಬೆಲೆ ಏರಿಕೆ ಜಾರಿಗೆ ಬಂದಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು(NPPA) 2024-25ರ ಆರ್ಥಿಕ ವರ್ಷದ ಆರಂಭದಿಂದ ಅಗತ್ಯ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ(MRP) ಈ ವರ್ಷ 0.00551% ಹೆಚ್ಚಿಸಿದೆ.
ಫಾರ್ಮಾಸ್ಯುಟಿಕಲ್ಸ್ ಇಲಾಖೆಯು 923 ನಿಗದಿತ ಔಷಧಳಿಗೆ ಪರಿಷ್ಕೃತ ಬೆಲೆಗಳ ವಾರ್ಷಿಕ ಪಟ್ಟಿಯನ್ನು ಮತ್ತು 65 ಫಾರ್ಮುಲೇಶನ್‌ಗಳಿಗೆ ಪರಿಷ್ಕೃತ ಚಿಲ್ಲರೆ ಬೆಲೆಗಳನ್ನು ಬಿಡುಗಡೆ ಮಾಡಿದೆ. ಸೀಲಿಂಗ್ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಇದು ಕೇಂದ್ರ ಸರ್ಕಾರದ ಬೆಲೆ ಹೊಂದಾಣಿಕೆ ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ದಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1996 ರಲ್ಲಿ 279 ಔಷಧಿಗಳನ್ನು ಒಳಗೊಂಡಿರುವ ಭಾರತದ ಅಗತ್ಯ ಔಷಧಿಗಳ ಮೊದಲ ರಾಷ್ಟ್ರೀಯ ಪಟ್ಟಿಯನ್ನು ತಯಾರಿಸಿ ಬಿಡುಗಡೆ ಮಾಡಿತು. ಪ್ರಸ್ತುತ, ಭಾರತದಲ್ಲಿ ಸರಿಸುಮಾರು 400 Molecules, 960 Formulations ಗಳು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಅಡಿಯಲ್ಲಿವೆ. ಈ ಔಷಧಿಗಳ ತಯಾರಕರು ಮಾರುಕಟ್ಟೆ ದರವನ್ನು ವಾರ್ಷಿಕವಾಗಿ 10% ಗಿಂತ ಹೆಚ್ಚು ಹೆಚ್ಚಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಆದರೆ, ಅನಿವಾರ್ಯವಲ್ಲದ ಔಷಧಿಗಳ ಬೆಲೆಗಳನ್ನು ಸರ್ಕಾರವು ಮೇಲ್ವಿಚಾರಣೆ ಮಾಡುತ್ತದೆ. ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿ ನಿಗದಿತ ಸೂತ್ರಗಳ ಪ್ರಕಾರ ಗರಿಷ್ಠ ಚಿಲ್ಲರೆ ಬೆಲೆಯನ್ನು(ಎಂಆರ್‌ಪಿ) ಸರ್ಕಾರದ ಪೂರ್ವಾನುಮತಿಯಿಲ್ಲದೆ ಹೆಚ್ಚಿಸಲು ತಯಾರಕರಿಗೆ ಅನುಮತಿಸಲಾಗಿದೆ.
ಗರಿಷ್ಠ ಮಾರಾಟ ದರ 90 ರೂ.ನಿಂದ 261 ರವರೆಗೆ ಇರುವ 54 ಔಷಧಗಳ ಬೆಲೆಯಲ್ಲಿ ಕೇವಲ ಒಂದು ಪೈಸೆ ಏರಿಕೆ ಆಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮಾಹಿತಿ ನೀಡಿದೆ. 2024- 25ರಲ್ಲಿ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಔಷಧಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಬಹುತೇಕ ಯಾವುದೇ ಬದಲಾವಣೆಯಾಗುವುದಿಲ್ಲವೆಂದು ಹೇಳಲಾಗಿದೆ.