ಬ್ರೇಕಿಂಗ್ ನ್ಯೂಸ್
ಹೈಕೋರ್ಟ್‌ ಹಾಲ್‌ನಲ್ಲಿ ಆತ್ಮಹತ್ಯಗೆ ಯತ್ನಿಸಿದ ವ್ಯಕ್ತಿ : ಘಟನೆಗೆ ಕಾರಣವೇನು ?

ಹೈಕೋರ್ಟ್‌ ಹಾಲ್‌ನಲ್ಲಿ ಆತ್ಮಹತ್ಯಗೆ ಯತ್ನಿಸಿದ ವ್ಯಕ್ತಿ : ಘಟನೆಗೆ ಕಾರಣವೇನು ?

ಈಜಗತ್ತು ನ್ಯೂಸ್ ಡೆಸ್ಕ್
News desk
April 4, 2024, 7:15 am
ಬೆಂಗಳೂರು: ಬುಧವಾರ ಮಧ್ಯಾಹ್ನ ಹೈಕೋರ್ಟ್‌ನ ನ್ಯಾಯಧೀಶರ ಮುಂದೆಯೇ ಬ್ಲೇಡ್‌ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ತಕ್ಷಣವೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ಇದೀಗ ಆತ ಯಾರು ಹಾಗೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇಕೆ ಎಂಬ ಮಾಹಿತಿ ಲಭ್ಯವಾಗಿದೆ. 

  ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಹೆಸರು ಚಿನ್ನಂ ಶ್ರೀನಿವಾಸ್. ಮೂಲತಃ ಮೈಸೂರಿನ ವಿಜಯನಗರದ ನಿವಾಸಿ. ಸಿಜೆಗೆ ದೂರು ನೀಡಲು ಹೆಂಡತಿ ಜೊತೆಯಲ್ಲಿ ಹೈಕೋರ್ಟ್‌ಗೆ ಬಂದಿದ್ದರು. ಈ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಶ್ರೀನಿವಾಸ್ ಚಿನ್ನಂ ದೂರು ನೀಡಿದ್ದರು. ಪ್ರಕರಣ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈ ಸಂಬಂಧ ಸಿಜೆಗೆ ದೂರು ನೀಡಲು ಬಂದಿದ್ದು, ಕೋರ್ಟ್ ಹಾಲ್​​ನಲ್ಲಿ ಸಿಬ್ಬಂದಿಗೆ ದೂರಿನ ಪ್ರತಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಚಿನ್ನಂ ಶ್ರೀನಿವಾಸ್ ಅವರು ಕೆಲವರೊಟ್ಟಿಗೆ ಸೇರಿ
 ಅಪಾರ್ಟ್‌ಮೆಂಟ್‌ ಕಟ್ಟಿ ಲಾಭ ಮಾಡುವ ಉದ್ದೇಶದಿಂದ  ಒಪ್ಪಂದ ಮಾಡಿಕೊಂಡಿದ್ದರು.
ಒಪ್ಪಂದದಂತೆ  ಚಿನ್ನಂ ಶ್ರೀನಿವಾಸ್ ಬಳಿ 93 ಲಕ್ಷ ರೂ. ಪಡೆದು ವಂಚಿಸಿದ್ದರು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ದೂರು ನೀಡಿದಕ್ಕೆ ಚಿನ್ನಂ ಶ್ರೀನಿವಾಸ್ ಅವರಿಗೆ ಬೆದರಿಕೆ ಕೂಡ ಹಾಕಿದ್ದರು. ಶ್ರೀನಿವಾಸ್ ನೀಡಿದ್ದ ದೂರಿನಂತೆ ಎಫ್‌ಐಆರ್‌ ದಾಖಲಿಸಿದ್ದರು. 

 ಎಫ್ಐಆರ್ ಪ್ರಶ್ನಿಸಿ ಶ್ರೀಧರ್ ರಾವ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿವಿಲ್ ವ್ಯಾಜ್ಯವಾಗಿರುವುದರಿಂದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ, ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿತ್ತು. 

 ಹೀಗಾಗಿ ಸಿಜೆಗೆ ದೂರು ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಕ್ಷಣದ ಸುದ್ದಿ